"ಯುವ ನಿಧಿ ಅರ್ಜಿ ಸ್ಥಿತಿಯನ್ನು ಹೇಗೆ ಪರಿಶೀಲಿಸುವುದು? How to check yuva nidhi application status

ಯುವ ನಿಧಿ ಸ್ಥಿತಿ ಪರಿಶೀಲನೆ ಹೇಗೆ? ಸ್ಟೆಪ್ ಬೈ ಸ್ಟೆಪ್ ಪ್ರಕ್ರಿಯೆ ಕನ್ನಡದಲ್ಲಿ!"

ಕರ್ನಾಟಕ ಸರ್ಕಾರದ "ಯುವ ನಿಧಿ ಯೋಜನೆ" ರಾಜ್ಯದ ಪದವಿ ಹಾಗೂ ಡಿಪ್ಲೊಮಾ ಪದವಿದಾರರಿಗೆ ನಿರುದ್ಯೋಗ ಭತ್ಯೆ ರೂಪದಲ್ಲಿ ಆರ್ಥಿಕ ನೆರವು ನೀಡುತ್ತಿರುವ ಮಹತ್ವದ ಯೋಜನೆಯಾಗಿದೆ. ಈ ಯೋಜನೆಯ ಅಡಿಯಲ್ಲಿ ಅರ್ಹ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ನಿಗದಿತ ಹಣವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ. ಆದರೆ, ಅನೇಕರು ತಮ್ಮ ಅರ್ಜಿ ಸ್ಥಿತಿ ಹೇಗಿದೆ ಎಂಬುದನ್ನು ತಿಳಿದುಕೊಳ್ಳಲು ತೊಂದರೆ ಅನುಭವಿಸುತ್ತಿದ್ದಾರೆ. ಈ ಬ್ಲಾಗ್‌ನಿಂದ ನೀವು ನಿಮ್ಮ ಯುವ ನಿಧಿ ಸ್ಥಿತಿಯನ್ನು ಹೇಗೆ ಪರಿಶೀಲಿಸಬೇಕು ಎಂಬುದನ್ನು ಸಂಪೂರ್ಣವಾಗಿ ತಿಳಿಯಬಹುದು.

ಪ್ರಾರಂಭಕ್ಕೂ ಮುನ್ನ - ಮೂಲಭೂತ ಮಾಹಿತಿ:

ಯೋಜನೆಯ ಹೆಸರು: ಯುವ ನಿಧಿ (Yuva Nidhi)
ಉದ್ದೇಶ: ನಿರುದ್ಯೋಗಿಗಳಿಗಾಗಿ ಆರ್ಥಿಕ ನೆರವು
ಪ್ರಯೋಜನ: ಪ್ರತಿ ತಿಂಗಳು ₹1500 (ಡಿಪ್ಲೊಮಾ) ಮತ್ತು ₹3000 (ಪದವಿ)
ಅರ್ಹತೆ: 2022-23/2024-2025 ರಲ್ಲಿ ಪದವಿ/ಡಿಪ್ಲೊಮಾ ಪೂರ್ಣಗೊಳಿಸಿರುವವರು
ಅರ್ಜಿಯ ವಿಧಾನ: Seva Sindhu ಪೋರ್ಟಲ್ ಅಥವಾ Karnataka One App ಮೂಲಕ

ಯುವ ನಿಧಿ ಸ್ಥಿತಿಯನ್ನು ತಿಳಿಯಲು ಬೇಕಾದ ಮಾಹಿತಿ

ಸ್ಥಿತಿಯನ್ನು ಪರಿಶೀಲಿಸಲು ಈ ಕೆಳಗಿನ ವಿವರಗಳು ಅಗತ್ಯ:

1.Seva Sindhu register Email ID or mobile number

2.Password

3.Yuva nidhi Application number

Step by step ಪ್ರಕ್ರಿಯೆ – ನಿಮ್ಮ ಯುವ ನಿಧಿ ಸ್ಥಿತಿಯನ್ನು ಪರಿಶೀಲಿಸುವುದು ಹೇಗೆ?

ಹಂತ 1: ಸೇವಾ ಸಿಂಧು ಪೋರ್ಟಲ್ ಗೆ ಭೇಟಿ ನೀಡಿ

Official Website: https://sevasindhu.karnataka.gov.in

Direct login page link:-https://sevasindhuservices.karnataka.gov.in/loginWindow.do

ಹಂತ 2: ರಿಜಿಸ್ಟರ್ ಮೊಬೈಲ್ ನಂಬರ್ ಅಥವಾ email ID ನಮೂದಿಸಿ, password ತಿಳಿದಿದ್ದರೆ ನಮೂದಿಸಿ ಅಥವಾ OTP ಆಪ್ಷನ್ ಬಳಸಿ, OTP ಯು ಮೊಬೈಲ್ ನಂಬರ್ ನಮೂದಿಸಿದ್ದರೆ ಮೊಬೈಲ್ ನಂಬರ್ ಗೆ ಬರುತ್ತದೆ ಅಥವಾ email ID ನಮೂದಿಸಿದರೆ ಈ ಮೇಲ್ ಐಡಿಗೆ ಬರುತ್ತದೆ, password ಅಥವಾ OTP ನಮೂದಿಸಿದ ನಂತರ, captcha ವನ್ನು ನಮೂದಿಸಿ ಲಾಗಿನ್ ಮೇಲೆ ಕ್ಲಿಕ್ ಮಾಡಿ,

ಹಂತ 3: ಲಾಗಿನ್ ಆದ ನಂತರ menu ಮೇಲೆ ಕ್ಲಿಕ್ ಮಾಡಿ, ಇದರಲ್ಲಿ apply for services ಆಪ್ಷನ್ ಮೇಲೆ ಕ್ಲಿಕ್ ಮಾಡಿ View all available services option ಓಪನ್ ಆಗುತ್ತದೆ ಅದರ ಮೇಲೆ ಕ್ಲಿಕ್ ಮಾಡಿ, ನಂತರ ಕೆಳಗೆ ನೀಡಿರುವ ಚಿತ್ರದಲ್ಲಿ ತೋರಿಸಿರುವಂತೆ search ಆಪ್ಷನ್ ಅಲ್ಲಿ 'yuva nidhi' ಎಂದು search ಮಾಡಿ, ನಂತರ ನಿಮಗೆ ಚಿತ್ರದಲ್ಲಿ ತೋರಿಸಿರುವಂತೆ 'Yuvanidhi Application Status Check' ಆಪ್ಷನ್ ಮೇಲೆ ಕ್ಲಿಕ್ ಮಾಡಿ,

ಹಂತ 4: ನಂತರ ನಿಮಗೆ YuvaNidhi ಅಪ್ಲಿಕೇಶನ್ ಸ್ಟೇಟಸ್ ಚೆಕ್ ಮಾಡುವ ಪೇಜ್ ಓಪನ್ ಆಗುತ್ತದೆ. ಇಲ್ಲಿ ನಿಗದಿಪಡಿಸಿದ ಜಾಗದಲ್ಲಿ ನಿಮ್ಮ ಅಪ್ಲಿಕೇಶನ್ ನಂಬರನ್ನು ನಮೂದಿಸಬೇಕು, ನಂತರ ನೀವು ಯಾವ ತಿಂಗಳಿನ ಅರ್ಜಿಯ ಸ್ಥಿತಿಯನ್ನು ತಿಳಿಯಬೇಕು ಎಂದುಕೊಂಡಿದ್ದಿರೋ ಆ ತಿಂಗಳನ್ನು ಆಯ್ಕೆ ಮಾಡಬೇಕು (ಪ್ರಸ್ತುತ ತಿಂಗಳನ್ನು ಆಯ್ಕೆ ಮಾಡಿ), ನಂತರ 'Click here to get Payment details/ಪಾವತಿ ವಿವರವನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ'ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ 

ಹಂತ 5: ಮೇಲಿರುವ ಎಲ್ಲಾ ಹಂತಗಳನ್ನು ಪೂರ್ಣಗೊಳಿಸಿದ ನಂತರ ನಿಮ್ಮ ಯುವನಿಧಿ ಅಪ್ಲಿಕೇಶನ್ ಸ್ಟೇಟಸ್ ತೆರೆದುಕೊಳ್ಳುತ್ತದೆ, ಇದರಲ್ಲಿ ನೀವು ಪಾವತಿಯ ಸ್ಥಿತಿ, ಪ್ರಸ್ತುತ ಸ್ಥಿತಿ, ಅರ್ಜಿ ಸಲ್ಲಿಸಿದ ದಿನಾಂಕ, ಸ್ವಯಂ ಘೋಷಣೆಯ ವಿವರ, ಇವುಗಳ ಬಗ್ಗೆ ಮಾಹಿತಿಯನ್ನು ಪಡೆಯಬಹುದು

Karnataka DBT Mobile App ಮೂಲಕ ಸ್ಥಿತಿ ಪರಿಶೀಲನೆ

ಹಂತ 1: Google Play Store ಗೆ ಹೋಗಿ – “Karnataka DBT” ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ

ಹಂತ 2: ಆಧಾರ್ ಸಂಖ್ಯೆ ಅಥವಾ ಮೊಬೈಲ್ ನಂಬರ್ ನಿಂದ ಲಾಗಿನ್ ಆಗಿ

ಹಂತ 3: "Yuva Nidhi" ವಿಭಾಗದಲ್ಲಿ ನಿಮ್ಮ ಸ್ಥಿತಿ ನೋಡಿ 

DBT ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ಈ ಬ್ಲಾಗನ್ನು ಓದಿ

https://www.prashuinfokannada.in/2025/04/dbt-dbt.html

 ಸ್ಥಿತಿಯನ್ನು ನೋಡಿದ ನಂತರ ಮುಂದೆ ಏನು ಮಾಡಬೇಕು?

Approved ಆಗಿದ್ರೆ: relaxed ಆಗಿ ಇರಿ. ಹಣ ನಿಮಗೆ ಶೀಘ್ರವೇ ಖಾತೆಗೆ ಬರಲಿದೆ.

Pending ಇದ್ದರೆ: ಸಂಬಂಧಪಟ್ಟ ಇಲಾಖೆಯನ್ನು ಸಂಪರ್ಕಿಸಿ. ನಿಮ್ಮ ದಾಖಲಾತಿಗಳನ್ನು verify ಮಾಡಿಸಬೇಕು.(DDPU and DDPI,DEEO, pending

Rejected ಆಗಿದ್ರೆ: ಕಾರಣ ತಿಳಿದು, ಅರ್ಜಿಯನ್ನು ಮರುಪೂರೈಸಿ ಅಥವಾ ಸಂಬಂಧಿಸಿದ ಅಧಿಕಾರಿಯನ್ನು ಸಂಪರ್ಕಿಸಿ.

Yuva Nidhi helpline number:-1800 599 7154

Payment Processed ಆಗಿದ್ರೆ: DBT ಅಲ್ಲಿ ನೀವು ಬ್ಯಾಂಕ್ ಖಾತೆ ಸ್ಟೇಟ್ಮೆಂಟ್ ಚೆಕ್ ಮಾಡಬಹುದು.

ಆಗಾಗ್ಗೆ ಸಂಭವಿಸಬಹುದಾದ ಸಮಸ್ಯೆಗಳು ಮತ್ತು ಪರಿಹಾರಗಳು

1. ಅರ್ಜಿದಾರರು ಅರ್ಜಿ ಸ್ಥಿತಿ ನೋಡಲಾಗುತ್ತಿಲ್ಲ: ಕಾರಣ

CAPTCHA ತಪ್ಪಾಗಿ ನಮೂದಿಸುತ್ತಿದ್ದಾರೆ

ಸರಿಯಾದ ಅಪ್ಲಿಕೇಶನ್ ID ನಮೂದಿಸಿಲ್ಲ

ಸರ್ವರ್ ತಾತ್ಕಾಲಿಕವಾಗಿ ಡೌನ್ ಆಗಿದೆ 

ಸರಿಯಾದ ಮಾರ್ಗವನ್ನು ಅನುಸರಿಸಿಲ್ಲ 

2. DBT ಅಪ್ಲಿಕೇಶನ್ ಲಾಗಿನ್ ಆಗುತ್ತಿಲ್ಲ: ಕಾರಣ 

ಇಂಟರ್ನೆಟ್ ಸಮಸ್ಯೆ

ಅಪ್ಲಿಕೇಶನ್ ಅಪ್‌ಡೇಟ್ ಅಗತ್ಯ

ಯುವ ನಿಧಿ ಸ್ಥಿತಿಯನ್ನು ಪರಿಶೀಲಿಸುವುದು ತುಂಬಾ ಸರಳ ಪ್ರಕ್ರಿಯೆಯಾಗಿದೆ. ಸರಿಯಾದ ಮಾಹಿತಿ ಇದ್ದರೆ ನೀವು ನಿಮ್ಮ ಅರ್ಜಿ ಸ್ಥಿತಿಯನ್ನು ಮನೆಬಾಗಿಲಲ್ಲೇ ಕುಳಿತು ನೋಡಬಹುದು. ಈ ಬ್ಲಾಗ್‌ನಲ್ಲಿ ನೀಡಲಾದ ಎಲ್ಲಾ ಹಂತಗಳನ್ನು ಅನುಸರಿಸಿ, ಯಾವುದೇ ತೊಂದರೆ ಇಲ್ಲದೆ ನೀವು ಸ್ಥಿತಿಯನ್ನು ಚೆಕ್ ಮಾಡಬಹುದು. ಇದು ನಿಗದಿತ ಸಮಯದಲ್ಲಿ ಹಣ ಪಾವತಿ ಆಗುತ್ತಿರುವದನ್ನು ಖಚಿತಪಡಿಸಿಕೊಳ್ಳಲು ಸಹಾಯಕವಾಗುತ್ತದೆ.



Previous Post Next Post