2025 SSLC Exam-2 Time Table | ಕರ್ನಾಟಕ SSLC ಪರೀಕ್ಷೆ-2 ಸಂಪೂರ್ಣ ಮಾಹಿತಿ-Supplementary Exam


ಕರ್ನಾಟಕ SSLC ಪರೀಕ್ಷೆ - 2 (2025): ಸಂಪೂರ್ಣ ಮಾಹಿತಿ-Supplementary Exam 

ಪ್ರತಿಯೊಬ್ಬ ವಿದ್ಯಾರ್ಥಿಯ ಶಿಕ್ಷಣ ಜೀವನದಲ್ಲಿ SSLC ಪರೀಕ್ಷೆ ಒಂದು ಪ್ರಮುಖ ಹಂತವಾಗಿದೆ. ಈ ಹಂತದಲ್ಲಿ ಯಶಸ್ಸು ಸಾಧಿಸುವುದು ಮುಂದಿನ ಶಿಕ್ಷಣದ ದಿಕ್ಕನ್ನು ತೋರಿಸುತ್ತದೆ. ಆದರೆ ಕೆಲವೊಮ್ಮೆ ನಿರೀಕ್ಷೆಯಂತೆ ಫಲಿತಾಂಶ ಬಾರದಿದ್ದರೆ, ಅದರಿಂದ ನಿರಾಶೆಗೊಳಗಾಗಬಾರದು. ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿ (KSEAB) SSLC ಪರೀಕ್ಷೆಯಲ್ಲಿ ಅಲ್ಪ ಅಂಕಗಳಿಂದ ಪಾಸ್ ಆಗದವರಿಗೋಸ್ಕರ ಪರೀಕ್ಷೆ - 2 ಅಥವಾ Supplementary Exam ರೂಪದಲ್ಲಿ ಮತ್ತೊಂದು ಅವಕಾಶ ಒದಗಿಸುತ್ತಿದೆ. ಇದು ವಿದ್ಯಾರ್ಥಿಗಳಿಗೆ ಪುನಃ ಒಂದು ಅವಕಾಶ, ಹೊಸ ಉತ್ಸಾಹದಿಂದ ತಯಾರಿ ಮಾಡಿ ಯಶಸ್ಸು ಸಾಧಿಸಲು. ಈ ಲೇಖನದಲ್ಲಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗುವುದು, ಹೆಚ್ಚಿನ ಮಾಹಿತಿಗಾಗಿ ನಮ್ಮ telegram ಚಾನೆಲ್ ಗೆ ಜಾಯಿನ್ ಆಗಿ- Join now 

SSLC ಪರೀಕ್ಷೆ - 2 ಅಂದರೆ ಏನು?

SSLC Exam - 2 ಅಥವಾ Supplementary Exam ಎಂದರೆ SSLC ಪ್ರಾಥಮಿಕ ಪರೀಕ್ಷೆಯಲ್ಲಿ ಒಂದು ಅಥವಾ ಹೆಚ್ಚಿನ ವಿಷಯಗಳಲ್ಲಿ ಪಾಸ್ ಆಗದ ವಿದ್ಯಾರ್ಥಿಗಳಿಗೆ ಕೊಡಲಾಗುವ ಎರಡನೇ ಅವಕಾಶ. ಇದರ ಮೂಲಕ ಅವರು ನೇರವಾಗಿ ಮುಂಬರುವ ಪದವಿಪೂರ್ವ ಶಿಕ್ಷಣ ಅಥವಾ ವೃತ್ತಿಪರ ಕೋರ್ಸ್‌ಗಳಿಗೆ ಹಾಗೂ ಉನ್ನತ ಶಿಕ್ಷಣಕ್ಕೆ ದಾರಿಯಾಗುತ್ತದೆ.

ಅರ್ಹತೆ (Eligibility):

2025SSLC ಮುಖ್ಯ ಪರೀಕ್ಷೆಯಲ್ಲಿ Fail ಅಥವಾ FA (Further Appearance) ಆಗಿರುವವರು ಅರ್ಜಿ ಹಾಕಬಹುದು.

ಎಲ್ಲಾ ಪರೀಕ್ಷಾ ವಿಷಯಗಳಲ್ಲಿ ಪುನಃ ಹಾಜರಾಗಲು ಅವಕಾಶವಿರುತ್ತದೆ.

SSLC ಪರೀಕ್ಷೆ - 2: ಪರೀಕ್ಷಾ ಶುಲ್ಕದ ವಿವರ (ರೂಪಾಯಿಯಲ್ಲಿ):

ವಿಷಯಗಳ ಸಂಖ್ಯೆ ಪರೀಕ್ಷಾ ಶುಲ್ಕ (₹)
01 ವಿಷಯಕ್ಕೆ ₹427/-
02 ವಿಷಯಗಳಿಗೆ ₹530/-
03 ಅಥವಾ ಹೆಚ್ಚು ₹716/-


SSLC ಪರೀಕ್ಷೆ - 2: ಮುಖ್ಯ ದಿನಾಂಕಗಳು (Important Dates)

ಕಾರ್ಯಕ್ರಮ ದಿನಾಂಕ
ಅಧಿಕೃತ ಅಧಿಸೂಚನೆ ಪ್ರಕಟಣೆ ಮೇ 1, 2025
ಆನ್‌ಲೈನ್ ಅರ್ಜಿ ಪ್ರಾರಂಭ ಮೇ 3, 2025
ಅರ್ಜಿ ಸಲ್ಲಿಸಲು ಕೊನೆಯ ದಿನ ಮೇ 10, 2025
ಪ್ರವೇಶಪತ್ರ ಡೌನ್‌ಲೋಡ್ before 26-05-2025
ಪರೀಕ್ಷೆ ಪ್ರಾರಂಭ ದಿನಾಂಕ 26-05-2025
ಪರೀಕ್ಷೆ ಕೊನೆ ದಿನ 02-06-2025
ಫಲಿತಾಂಶ ಪ್ರಕಟಣೆ ಜುಲೈ ಮೊದಲ ವಾರ, 2025(ಅಂದಾಜು, ಮುಂದೆ ತಿಳಿಸಲಾಗುವುದು)


2025 ರ SSLC ಪರೀಕ್ಷೆ-2 ಅನ್ನು ದಿನಾಂಕ:26-05-2025 ರಿಂದ 02-06-2025 ವರೆಗೆ ನಡೆಸಲು ತೀರ್ಮಾನಿಸಲಾಗಿದೆ

ಪರೀಕ್ಷಾ ವೇಳಾಪಟ್ಟಿ (Tentative Time Table)

>ಪರೀಕ್ಷಾ ವೇಳಾಪಟ್ಟಿಯನ್ನು ಈ ಕೆಳಗಂಡಂತೆ ಕಾಣಬಹುದಾಗಿದೆ.

>ಮುಂದೆ ಯಾವುದೇ ಬದಲಾವಣೆ ಆದಲ್ಲಿ ನಮ್ಮ ವೆಬ್ಸೈಟ್ನಲ್ಲಿ ತಿಳಿಸಲಾಗುವುದು

>ಈ ನೋಟಿಫಿಕೇಶನ್ PDF ಪಡೆಯಲು ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ- click here join now 

ಅರ್ಜಿ ಸಲ್ಲಿಕೆ ವಿಧಾನ (How to Apply):

1. KSEAB ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ: https://kseab.karnataka.gov.in

2. SSLC Exam-2 Application ಲಿಂಕ್‌ ಮೇಲೆ ಕ್ಲಿಕ್ ಮಾಡಿ.

3. ನಿಮ್ಮ ನೋಂದಣಿಸಂಖ್ಯೆ ಮತ್ತು ಇತರೆ ವಿವರಗಳನ್ನು ನಮೂದಿಸಿ.

4. ಅಗತ್ಯ ಡಾಕ್ಯುಮೆಂಟ್‌ಗಳನ್ನು ಅಪ್ಲೋಡ್ ಮಾಡಿ.

5. ನಿಗದಿತ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ.

6. ಅರ್ಜಿ ಸಲ್ಲಿಸಿ ಮತ್ತು ದೃಢೀಕರಣ ಪ್ರತಿ ಡೌನ್‌ಲೋಡ್ ಮಾಡಿ.

ಪರೀಕ್ಷಾ ಮಾದರಿ (Exam Pattern):

1.ಎಲ್ಲಾ ಪ್ರಶ್ನೆಪತ್ರಿಕೆಗಳು OMR ಆಧಾರಿತವಾಗಿರುತ್ತವೆ.

2.ಪ್ರಶ್ನೆಗಳ ತೀವ್ರತೆ ಮುಖ್ಯ ಪರೀಕ್ಷೆಯಷ್ಟೇ ಇರುತ್ತದೆ.

3.ಉತ್ತರಪತ್ರಿಕೆಯಲ್ಲಿ ಕಪ್ಪು ಅಥವಾ ನೀಲಿ ಬಾಲ್ ಪೆನ್ ಬಳಸಿ ಬರೆಯಬೇಕು.

ಫಲಿತಾಂಶ ಪ್ರಕಟಣೆ (Result):

ಅಂದಾಜು ದಿನಾಂಕ: ಜುಲೈ ಮೊದಲ ವಾರ 2025

ಫಲಿತಾಂಶವನ್ನು ಇವುಗಳಲ್ಲಿ ನೋಡಬಹುದಾಗಿದೆ:

1.KSEAB ಅಧಿಕೃತ ಜಾಲತಾಣ

2.SMS ಮೂಲಕ: ನಿಮ್ಮ ನೋಂದಣಿಸಂಖ್ಯೆಯನ್ನು 56263 ಗೆ SMS ಮೂಲಕ ಕಳಿಸಿ ನಿಮ್ಮ ಪರೀಕ್ಷೆ ಪಲಿತಾಂಶವನ್ನು ತಿಳಿಯಬಹುದು.

3.ಶಾಲೆಯ ನೋಟೀಸ್ ಬೋರ್ಡ್

ಸರಳ ಪ್ರಶ್ನೋತ್ತರ (FAQs):

ಪ್ರಶ್ನೆ 1: SSLC ಪರೀಕ್ಷೆ - 2 ಯಾರು ಬರೆಯಬಹುದು?

ಉತ್ತರ: 2025 SSLC ಮುಖ್ಯ ಪರೀಕ್ಷೆಯಲ್ಲಿ ಪಾಸ್ ಆಗದ ವಿದ್ಯಾರ್ಥಿಗಳು ಬರೆಯಬಹುದು.

ಪ್ರಶ್ನೆ 2: ಎಷ್ಟು ಬಾರಿ SSLC Exam-2 ಬರೆಯಲು ಅವಕಾಶವಿದೆ?

ಉತ್ತರ: ಗರಿಷ್ಠ 6 ಬಾರಿ ಬರೆಯಬಹುದು.

ಪ್ರಶ್ನೆ 3: ಈ ಪರೀಕ್ಷೆಯಲ್ಲಿ ಪಾಸ್ ಆದ ಫಲಿತಾಂಶ ಇತರರು ಸಹ ಮಾಡಿರುವಂತೆ ಲೆಕ್ಕವಾಗುತ್ತದೆಯಾ?

ಉತ್ತರ: ಹೌದು, ಸಮಾನ ಮೌಲ್ಯವನ್ನು ಹೊಂದಿರುತ್ತದೆ.

ಪ್ರಶ್ನೆ 4: ಆಫ್‌ಲೈನ್ ಮೂಲಕ ಅರ್ಜಿ ಹಾಕಬಹುದೆ?

ಉತ್ತರ: ಇಲ್ಲ. ಅರ್ಜಿ ಪ್ರಕ್ರಿಯೆ ಸಂಪೂರ್ಣವಾಗಿ ಆನ್‌ಲೈನ್‌ನಲ್ಲೇ ಇರುತ್ತದೆ.

ಪ್ರಶ್ನೆ 5: SSLC Supplementary Result ಗೆ revaluation ಇರುವದೆಯೆ?

ಉತ್ತರ: ಇಲ್ಲ. SSLC ಪರೀಕ್ಷೆ - 2 ಗೆ ಪುನರ್ ಮೌಲ್ಯಮಾಪನ (Revaluation) ಅವಕಾಶವಿಲ್ಲ.

ವಿದ್ಯಾರ್ಥಿಗಳೇ, SSLC ಪರೀಕ್ಷೆ - 2 ನಿಮ್ಮ ಭವಿಷ್ಯ ರೂಪಿಸುವಲ್ಲಿನ ಇನ್ನೊಂದು ದೊಡ್ಡ ಅವಕಾಶ. ಇದು ನೀವು ಭವಿಷ್ಯದಲ್ಲಿ ಯಾವ ಮಟ್ಟಕ್ಕೆ ಹೋಗಬಹುದು ಎಂಬುದನ್ನು ತೋರಿಸುವ ಪಠ್ಯದಾರಿಯಾಗಿದೆ. ಒಂದೆರಡು ವಿಷಯಗಳಲ್ಲಿ ತೊಂದರೆಯಾದರೂ ನೀವು ಸೋತಿದ್ದಲ್ಲ, ನಿಮ್ಮ ಶಕ್ತಿ ಇನ್ನೂ ನಿಮ್ಮೊಳಗಿದೆ. ಈ ಪರೀಕ್ಷೆಗೆ ಸದೃಢವಾದ ತಯಾರಿಯೊಂದಿಗೆ ಹಾಜರಾಗಿರಿ. ಸಮಯ ಸರಿಯಾಗಿ ನಿರ್ವಹಿಸಿ, ಸರಿಯಾದ ಮಾರ್ಗದಲ್ಲಿ ಓದಿ, ಯಶಸ್ಸನ್ನು ನಿಮ್ಮದಾಗಿಸಿಕೊಳ್ಳಿ.

"ಪರೀಕ್ಷೆ ಮುಗಿಯಬಹುದು, ಆದರೆ ಅವಕಾಶಗಳು ಇಲ್ಲಿಯೇ ಶುರುವಾಗುತ್ತವೆ!"


Previous Post Next Post